ಮುಂದೊಯ್ಯಿ ಪ್ರತಿಷ್ಠಾನವನು ( ) ಐಸಾಕ್ ಅಸಿಮೋವ್ ಬರೆದ ಒಂದು ಕಾದಂಬರಿ. ಇದು ಪ್ರತಿಷ್ಠಾನ ಸರಣಿ ಕಾದಂಬರಿಗಳಿಗೆ ಬರೆದ ಎರಡು ಪೂರ್ವಘಟಿತವ್ಯಗಳಲ್ಲಿ ಒಂದು (ಮತ್ತೊಂದು ಪ್ರತಿಷ್ಠಾನಕ್ಕೆ ಪೂರ್ವರಂಗ. ಇವುಗಳಲ್ಲಿನ ಅಧ್ಯಾಯಗಳನ್ನು ಸ್ವತಂತ್ರ ಸಣ್ಣ ಕಥೆಗಳಾಗಿ ಮೊದಲು ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದ್ದಿತು. = ಕಥಾ ಸಾರಾಂಶ = ಈ ಕಾದಂಬರಿಯಲ್ಲಿ, ಪ್ರತಿಷ್ಠಾನಕ್ಕೆ ಪೂರ್ವರಂಗದ ಘಟನೆಗಳ ನಂತರದ ಕಥನವಿರುವುದು. ಈ ಕಾದಂಬರಿಯ ಘಟನೆಗಳು ಕ್ಷೀರಪಥ ಸಾಮ್ರಾಜ್ಯದ ಟ್ರ್ಯಾಂಟರ್ನಲ್ಲಿ ನಡೆಯುತ್ತದೆ. ಕಥನವು ಹ್ಯಾರಿ ಸೆಲ್ಡನ್ ಹೇಗೆ ತನ್ನ ಮಾನಸಿಕ-ಇತಿಹಾಸಶಾಸ್ತ್ರವನ್ನು (ಸೈಕೋಹಿಸ್ಟರಿ)ಯನ್ನು ಸಂಸ್ಥಾಪಿಸಿ ವಿಸ್ತರಿರುತ್ತಾನೆ ಎಂಬುದನ್ನು ವಿವರಿಸುತ್ತದೆ.